Home

ಪಟ್ಟಣ ಪಂಚಾಯತ ಕಾರ್ಯಾಲಯ, ಕಲಘಟಗಿ.

WELCOME TO  KALAGHATAGI, TOWN PANCHAYAT  OFFICIAL WEBSITE

Municipal Reform Cell,Directorate of Municipal Administration has won the Bronze Award for the project “Aasthi GIS based

property tax information in National Awards for e-Governanceunder the category - Excellence in Government Process

Re-Engineering 2011"  

****************************************

 * ದಿನಾಂಕ: 02-04-2012 ರಂದು ಬೆಳಗ್ಗೆ 11.00 ಘಂಟೆಗೆ, ಸಕಾಲ (ಕೆ.ಜಿ.ಎಸ್.ಸಿ) ಕೇಂದ್ರವನ್ನು ಕಲಘಟಗಿ ಪಟ್ಟಣ ಪಂಚಾಯತದಲ್ಲಿ ಉದ್ಘಾಟಿಸಲಾಯಿತು.

ಸಾರ್ವಜನಿಕ ತಿಳುವಳಿಕೆ : -

                          ಕಲಘಟಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿರುವ ಆಸ್ತಿ ವಿವರಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ ಎಂಬ ಅಂಶವನ್ನು ತಮಗೆ ತಿಳಿಸಲು ಹರುಷವೆನಿಸುತ್ತೆದೆ. ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ದಿನಾಂಕ: 12-01-2012 ರಿಂದ 26-01-2012 ರವರೆಗೆ ಫಾರಂ 'ಸಿ'  ನಾಗರೀಕ  ಪ್ರತಿಯನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ ಹಾಗೂ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನು ಸ್ವಿಕರಿಸಿ ಸ್ಥಳ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದೆ.

-: ಕಲಘಟಗಿ ಪಟ್ಟಣ ಪಂಚಾಯತ :-

                     ಕಲಘಟಗಿ ಪಟ್ಟಣ ಪಂಚಾಯತ 1996ರಲ್ಲಿ ಸ್ಥಾಪನೆಯಾಯಿತು. ಕಲಘಟಗಿ ಪಟ್ಟಣ ಪಂಚಾಯತಿಯು ಹುಬ್ಬಳ್ಳಿಯಿಂದ ಕಾರವಾರಗೆ ಹೋಗುವ ಎನ್ ಎಚ್-218 ರಸ್ತೆಯಲ್ಲಿದ್ದು ಹುಬ್ಬಳ್ಳಿಯಿಂದ ಸುಮಾರು 28 ಕೀ.ಮೀ. ದೂರದಲ್ಲಿರುತ್ತದೆ. 2011 ರ ಜನಗಣತಿಯ ಪ್ರಕಾರ ಕಲಘಟಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 16917 ಜನಸಂಖ್ಯೆಯನ್ನು ಹೊಂದಿರುತ್ತದೆ. ಕಲಘಟಗಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ 13 ವಾರ್ಡಗಳಿದ್ದು. 13 ಚುನಾಯಿತ ಸದಸ್ಯರಿರುತ್ತಾರೆ. ಕಲಘಟಗಿ ಪಟ್ಟಣ ಪಂಚಾಯತ ವ್ಯಾಪ್ತಿಯು ಒಟ್ಟು 22.92 ಚದುರ ಕೀ.ಮೀ.ಗಳಿರುತ್ತದೆ. ಕಲಘಟಗಿ ಪಟ್ಟಣದಲ್ಲಿ ತೊಟ್ಟಿಲುಗಳನ್ನು ತಯಾರಿಸುವುದು ರಾಷ್ಟ್ರೀಯ ಮಟ್ಟದ ಗಣ್ಯರಿಂದ ಪ್ರಸಿದ್ದಿಯನ್ನು ಪಡೆದಿರುತ್ತದೆ. 

-: Brief Introduction of Kalaghatagi TP :-

                        The Town Panchayat (TP) Kalaghatagi was constituted in 1996. It is situated along Hubli- Karwar National Highway No. 218 at a distance of 28 Kms from Hubli.It has a population of 16917 as per Census 2011.The TP has13 wards and equal number of  Councilors . Kalaghatagi TP stretches to an area of 22.92 Sq.Kms. Kalaghatagi is Famous for "Dyammavva & Durgamma Temple.". Who are the town Diety (Grama Devata) Once in 3 Years jatra Will be Celebrated, it is also famousfor Colourfull and Designed "Wooden Cradles".

****************************************

ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯ 2011 (Karnataka Guarantee Service Act 2011) 

****************************************

ಕೆ.ಎಂ.ಆರ್.ಪಿ  ಯೋಜನೆಯ ಗಣಕೀಕರಣ ಕಿರಿ ಪರಿಚಯ

* ಗಣಕೀಕರಣ: ಕಲಘಟಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.

 

* ಸಾರ್ವಜನಿಕ ಕುಂದು ಕೊರತೆ ವಿಭಾಗ (ಪಿ.ಜಿ.ಆರ್ ಆನ್ ಲೈನ್ ಅಪ್ಲಿಕೇಷನ್ ): ಕಲಘಟಗಿ ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ.ಈ ಕುಂದುಕೊರತೆ ಪರಿಹಾರ ಕೇಂದ್ರವು ಪ್ರತಿ ದಿನ ಮುಂಜಾನೆ 8.00 ರಿಂದ ಸಂಜೆ 8.00ರ ವರಗೆ ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯ ವಾಣಿ: 08370-284542 ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ವೆಬ್ ತಾಣ  (www.kalaghatagitown.gov.in) ಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ.ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ. ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು " Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕ ಸಹ ಇ-ಮೇಲ್ ವಿಳಾಸ ನೊಂದಾಯಿಸಿ  ಪಡೆಯಬಹುದಾಗಿರುತ್ತದೆ.

 

* ಜನನ - ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್1990 ರಿಂದ ಇಲ್ಲಿಯವರೆಗಿನ ಕಲಘಟಗಿ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು. ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ತ್ವರಿತವಾಗಿ ಜನನ-ಮರಣ ದಾಖಲಾತಿಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.

* ಭೌಗೋಳಿಕ ಆಸ್ತಿ ತೆರಿಗೆ ಪದ್ದತಿ ಅನುಷ್ಠಾನ ಕಾರ್ಯಪೌರ ಸುಧಾರಣಾ ಯೋಜನೆಯಡಿ ಕಲಘಟಗಿ ಪಟ್ಟಣ ಪಂಚಾಯತಯಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗಿದೇ.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಆಸ್ತಿ ತೆರಿಗೆ ವಿವರಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದಾಗಿದ್ದು ಕಲಘಟಗಿ ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

* ನಿಧಿ ಆಧಾರಿತ ದ್ವಿ-ನಮೂದು ಸಂಚಯನ ಲೆಕ್ಕ ಪದ್ದತಿಕಲಘಟಗಿ ಪಟ್ಟಣ ಪಂಚಾಯತ ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು  ಈ ಆನ್‌ಲೈನ್ ಅಪ್ಲಿಕೇಷನ್‌ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌ಡೇಟ್‌ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ (www.kalaghatagitown.gov.in) ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.

COMPUTERIZATION : - Properties within Kalaghatagi TP limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificates.

----------------------------------------------------------------------------------------------------------------------------------------------------------------------------------------------------------------------------------------------------------

" This Page is Maintained By Sri M. I Kutri (Chief Officer) Last Updated On 03-06-2015"

No. Of Visitors :
Last Updated   : 24/07/2015  Release History
Release 2.0.0, Powered By Karnataka Municipal Data Society & maintained by Kalaghatagi TP
This website can best viewed with the resolution 1024 * 768 using Internet Explorer 7.0 or above.
Valid CSS!